Sunday, 21 September 2025

ಶಿಕ್ಷಣ ಹಕ್ಕು ಕಾಯ್ದೆ 2010 ಏನು ಹೇಳುತ್ತೆ ಅಂದ್ರೆ..!

ಕೇಂದ್ರ ಸರ್ಕಾರ 2010ರಲ್ಲಿ ಜಾರಿಗೆ ತಂದ ಶಿಕ್ಷಣ ಕಾಯ್ದೆಯನ್ನು ರಾಜ್ಯದಲ್ಲಿ 2012ರಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ -13ರ ಪ್ರಕಾರ ಡೊನೇಷನ್ ಪಡೆಯುವ, ಅಧಿಕ ಶುಲ್ಕ ವಸೂಲಿ ಮಾಡುವ ಶಾಲೆಗಳಿಗೆ ಅವು ವಸೂಲಿ ಮಾಡಿದ ಮೊತ್ತದ ಹತ್ತು ಪಟ್ಟು ದಂಡ ವಿಧಿಸಲು ಅವಕಾಶವಿದೆ. 
ಇದೇ ಕಾಯ್ದೆಯ ಸೆಕ್ಷನ್ 2 B ಪ್ರಕಾರ ಶುಲ್ಕದ ವಿವರವನ್ನು ಆಯಾ ಶಾಲೆ ಅವರು ಸಂಸ್ಥೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು. ಪ್ರವೇಶದ ಅರ್ಜಿಯ ಜೊತೆಗೆ ವಿದ್ಯಾರ್ಥಿಗಳಿಗೆ ನೀಡುವ ಕಿರು ಹೊತ್ತಿಗೆಯಲ್ಲೂ ಅದನ್ನು ಮುದ್ರಿಸಬೇಕು. ಶಿಕ್ಷಣ ಇಲಾಖೆಯು ಶಾಲೆಗಳ ಶುಲ್ಕದ ವಿವರವನ್ನು ಆಯಾ ವರ್ಷ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.

ರಾಜ್ಯ ಸರ್ಕಾರದ ಅಂಕುಶದಿಂದ ತಪ್ಪಿಸಿಕೊಳ್ಳಲು ಬಹುತೇಕ ಶಾಲೆಗಳು ಐಸಿಎಸ್‌ಸಿ, ಸಿಬಿಎಸ್‌ಸಿ ಪಠ್ಯಕ್ರಮದ ಮೊರೆ ಹೋಗುತ್ತಿವೆ. ಎಮ್ಮೆ ಯುಸಿ ಸಿಕ್ಕರೆ ತಮ್ಮ ಮೇಲೆ ರಾಜ್ಯದ ಶಿಕ್ಷಣ ಇಲಾಖೆ ನಿಯಂತ್ರಣ ಸಾಧಿಸೋದ ಕಷ್ಟ ಎಂಬ ಕಾರಣಕ್ಕೆ ಅವು ಈ ಜಾಣ ನಡೆ ಅನುಸರಿಸುತ್ತಿವೆ. ಆದರೆ ಶಿಕ್ಷಣ ಕಾಯಿದೆ ಹೇಳುವುದೇ ಬೇರೆ..!

ಕಾಯ್ದೆ ಸೆಕ್ಷನ್ 3ರ ಪ್ರಕಾರ ಶಾಲೆಗಳನ್ನು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಎಂದು ವಿಭಜಿಸಲಾಗಿದೆಯೇ ಹೊರತು ರಾಜ್ಯ ಪಠ್ಯ, ಕೇಂದ್ರ ಪಠ್ಯ ಎಂಬ ವಿಭಜನೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಎಲ್ಲಾ ಪಠ್ಯಕ್ರಮ ಅನುಸರಿಸುವ ಶಾಲೆಗಳ ಮೇಲು ನಿಯಂತ್ರಣ ಸಾಧಿಸಬಹುದು.

ಲೇಖನ: ಸಂತೋಷ್ ಮಂಡ್ಯ ಗೌಡ,
ಅಧ್ಯಕ್ಷರು, ಹಸಿರು ಸೇನೆ, ಮಂಡ್ಯ ತಾಲೂಕು ರೈತ ಸಂಘ.

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.

 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...