Wednesday, 31 January 2024

ದೇಶದ ಅತ್ಯುನ್ನತ ಗುಣಮಟ್ಟದ ಶಾಲೆಗಳೇ ಸೈನಿಕ ಶಾಲೆಗಳು..!




ಕೆಪಿಎಸ್‌ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ತಯಾರಿಯ ಮೊದಲ ಹೆಜ್ಜೆಯೇ, ಐದನೇ ತರಗತಿಯಲ್ಲಿ ಬರುವ ಸೈನಿಕ ಶಾಲೆಯ ಪರೀಕ್ಷೆ. ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ಪಠ್ಯಕ್ರಮವನ್ನು 5ನೇ ತರಗತಿಯ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಕೇಲ್ ಡೌನ್ ಮಾಡಿ ಸೈನಿಕ ಶಾಲೆಯ 5ನೇ ತರಗತಿಯ ಪರೀಕ್ಷೆ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. 

ಇದು 5ನೇ ತರಗತಿ ಹಂತದಲ್ಲಿ ಬರುವ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಅತ್ಯಂತ ಕಠಿಣ ಪರೀಕ್ಷೆಯಲ್ಲೊಂದಾಗಿದೆ. ಸೈನಿಕ ಶಾಲೆಯ ಪರೀಕ್ಷೆಯ ಮುಂದೆ ನವೋದಯ ಪರೀಕ್ಷೆ ಏನೇನು ಅಲ್ಲ. ಏಕೆಂದರೆ ನವೋದಯ ಶಾಲೆಗಳು ಪ್ರತಿ ಜಿಲ್ಲೆಯಲ್ಲಿ ಒಂದೊಂದು ಇದ್ದರೆ, ಪೂರ್ತಿ ರಾಜ್ಯದಲ್ಲಿ ಸೈನಿಕ ಶಾಲೆಗಳು ಇರುವುದು ಕೇವಲ ನಾಲ್ಕೆನಾಲ್ಕು..! 

ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸುವ ಮಕ್ಕಳಲ್ಲಿ ಶೇಕಡ 50ಕ್ಕೂ ಹೆಚ್ಚು ಮಕ್ಕಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಸರಕಾರಿ ಸಂಸ್ಥೆಗಳಿಗೆ ಸೇರಿದರೆ, ಉಳಿದ ಮಕ್ಕಳು ವಿವಿಧ ರಾಷ್ಟ್ರೀಯ ಅಂತರಾಷ್ಟ್ರೀಯ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.

ಉತ್ತಮ ಗುಣಮಟ್ಟದ ಸಿಬಿಎಸ್‌ಸಿ ಪಠ್ಯಕ್ರಮದ ಶಿಕ್ಷಣದ ಜೊತೆ ಕ್ರೀಡೆಗೂ ಅಷ್ಟೇ ಪ್ರಮಾಣದ ಮಹತ್ವ ನೀಡುವ ಸೈನಿಕ ಶಾಲೆಗಳು, ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿಯನ್ನು ನೀಡುತ್ತವೆ. 

'ಉಳಿ ಪೆಟ್ಟು ತಿಂದ ಶಿಲೆ'ಯಂತೆ ಮಿಲಿಟರಿ ಶಿಕ್ಷಣ ತರಬೇತಿ ಪಡೆದ ಮಕ್ಕಳು ಬೆಳೆ ಬೆಳೆಯುತ್ತ ಮಾನಸಿಕವಾಗಿ ಸದೃಢರಾಗಿ ಜೀವನದಲ್ಲಿ ಬರುವ ಸಮಸ್ಯೆಗಳ ಜೊತೆ ಫುಟ್ಬಾಲ್ ಜೊತೆ ಆಟವಾಡುವ ರೀತಿ ಆಟವಾಡುತ್ತಾ ಜೀವನ ನಡೆಸುತ್ತಾರೆ. 

                                                        --ಪ್ರೊ. ಸಂತೋಷ್ ಮಂಡ್ಯಗೌಡ 

No comments:

Post a Comment

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.

 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...