ಟಿಬೆಟ್ ದೇಶದ ಲಾಸಾ ಯುನಿವರ್ಸಿಟಿಯಲ್ಲಿ ಯೋಗವನ್ನು ಒಂದು ಕಡ್ಡಾಯ ವಿಷಯವನ್ನಾಗಿ ಅಳವಡಿಸಿ ಪಾಠ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಯೋಗದ ಮೇಲೆ ನಡೆಯುವ ಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಳ್ಳುತ್ತಾರೆ. ಅದರ ಹೆಸರು "Heat Yoga" ಅಥವಾ ಕನ್ನಡದಲ್ಲಿ ತಾಪಯೋಗ ಎಂದು ಕರೆಯಬಹುದು. ತಾಪಯೋಗದ ಪ್ರಕ್ರಿಯೆಯಲ್ಲಿ, ಮನಸ್ಸಿನ ಪ್ರಭಾವದಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವಂತೆ ಮಾಡಲಾಗುತ್ತದೆ. ಇದನ್ನು ನಂಬಲು ತುಂಬಾ ಕಷ್ಟ. ಏಕೆಂದರೆ ಕೊರೆಯುವ ಚಳಿಯ ಹಿಮ ಬೀಳುವ ಸಮಯದಲ್ಲಿ ಬೆತ್ತಲೆ ವಿದ್ಯಾರ್ಥಿಗಳನ್ನು ನಿಲ್ಲಿಸಿ, ಮನಸ್ಸಿನ ಪ್ರಭಾವದಿಂದ ಬೆವರುವಂತೆ ಮಾಡುವುದು..!
ಒಂದು ದಿನ ಪಾಶ್ಚಾತ್ಯ ದೇಶದ ಡಾಕ್ಟರ್ ಗಳ ಒಂದು ಸಮೂಹ, ತಾಪ ಯೋಗವನ್ನು ಖುದ್ದಾಗಿ ಪರೀಕ್ಷೆ ಮಾಡಲೆಂದೇ ಟಿಬೇಟಿಗೆ ಬಂದಿಳಿದಿತ್ತು. ಆ ದಿನ ಮಧ್ಯರಾತ್ರಿಯಲ್ಲಿ ಕೊರೆಯುವ ಚಳಿಯಲ್ಲಿ ಹರಿಯುತ್ತಿರುವ ನದಿಯ ಪಕ್ಕ ಮಳೆಯಂತೆ ಹಿಮ ಬೀಳುವ ಸಮಯದಲ್ಲಿ, ಕೆಲವು ವಿದ್ಯಾರ್ಥಿಗಳನ್ನು ಬೆತ್ತಲೆ ನಿಲ್ಲುವಂತೆ ಸೂಚಿಸಲಾಗಿತ್ತು. ಡಾಕ್ಟರ್ ಗಳು ಬೆಚ್ಚನೆಯ ದಪ್ಪ ಹತ್ತಿಯ ಬಟ್ಟೆ ಹಾಕಿದ್ದರೂ ಸಹ ಗಡಗಡ ನಡುಗುತ್ತಿದ್ದರೆ, ಅವರ ಮುಂದೆ ಬೆತ್ತಲೆ ನಿಂತ ವಿದ್ಯಾರ್ಥಿಗಳು ಬೆವರುತ್ತಿದ್ದರು..!
ಇದು ಹೇಗೆ ಸಾಧ್ಯವಾಯಿತೆಂದರೆ, ಕೊರೆಯುವ ಚಳಿಯಲ್ಲಿ ಬೆತ್ತಲೆ ನಿಂತ ವಿದ್ಯಾರ್ಥಿಗಳು, ತಮ್ಮ ಮನಸ್ಸಿನಲ್ಲಿ, "ಇವತ್ತು ಚಳಿ ಇಲ್ಲ, ಹಿಮ ಬೀಳುತ್ತಿಲ್ಲ, ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ, ವಿಪರೀತ ಸೆಕೆ" ಎಂದು ಮನಸ್ಸಿನಲೇ ಹೇಳುತ್ತಿದ್ದರು.
ಇದರರ್ಥ ವಿದ್ಯಾರ್ಥಿಗಳ ದೇಹ ಪ್ರಕೃತಿಯ ಮಾತಿಗಿಂತ ಮನಸ್ಸಿನ ಮಾತು ಕೇಳುತ್ತಿತ್ತು..!
ಅದಿಕ್ಕೆ ಹೇಳಿದ್ದು ಯಾವಾಗಲೂ ಹೃದಯದ ಮಾತು ಕೇಳಬೇಕು ಅಂತ...
--ಪ್ರೋ. ಸಂತೋಷ್ ಮಂಡ್ಯಗೌಡ
No comments:
Post a Comment