Wednesday, 31 January 2024

ಸೆಪ್ಟೆಂಬರ್ 28: ವಿಶ್ವ ರೇಬಿಸ್ ದಿನ


ಸೆಪ್ಟಂಬರ್ 28ರಂದು ಹುಚ್ಚುನಾಯಿ ರೋಗಕ್ಕೆ ಲಸಿಕೆ ಕಂಡುಹಿಡಿದ ಶ್ರೇಷ್ಠ ವಿಜ್ಞಾನಿ ಲೂಯಿ ಪಾಶ್ಚರ್ ನಿಧನರಾದ ದಿನ. ಈ ದಿನವನ್ನು ಗೌರವಾರ್ಥವಾಗಿ ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.

 ಪ್ರತಿ ವರ್ಷ ರೇಬಿಸ್ ರೋಗಕ್ಕೆ ವಿಶ್ವದಲ್ಲಿ 59 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ. ಮತ್ತು ಭಾರತದಲ್ಲಿ ಪ್ರತಿ ವರ್ಷ ನಾಯಿ ಕಡಿತದ ಒಂದು ಮುಕ್ಕಾಲು ಕೋಟಿ ಪ್ರಕರಣಗಳು ವರದಿಯಾಗುತ್ತಿವೆ.

 ನಿಮಗೆ ತಿಳಿದಿರಲಿ ರೆಬಿಸ್ ರೋಗಕ್ಕೆ ಯಾವುದೇ ಮದ್ದಿಲ್ಲ. ಅದಕ್ಕೆ ಮುಂಜಾಗ್ರತೆಯೇ ಮದ್ದು. ಆದ್ದರಿಂದ ಸಾಕು ನಾಯಿಗಳಿಗೆ ಲಸಿಕೆ ಹಾಕಿಸುವುದು ಪ್ರತಿಯೊಬ್ಬ ಮಾಲೀಕನ ಕರ್ತವ್ಯ ಮತ್ತು ಬೀದಿ ನಾಯಿಗಳನ್ನು ನಿಯಂತ್ರಣದಲ್ಲಿ ಇಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ.

 ಭಾರತ ಸರ್ಕಾರವು ಈ ವಿಷಯದಲ್ಲಿ ಒಂದು ಕಾರ್ಯ ಯೋಜನೆ ರೂಪಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್ 15 ರಿಂದ 30 ರವರೆಗೆ ಸರ್ಕಾರಿ ಪಶು ವೈದ್ಯ ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.

 ನಾಯಿ ಕಡಿದ ತಕ್ಷಣ ಸ್ವಚ್ಛ ನೀರಿನಿಂದ ಚೆನ್ನಾಗಿ ತೊಳೆದು ನಂಜು ನಿವಾರಕ ಅಯೋಡಿನ್ ಅಥವಾ ಸ್ಪಿರಿಟ್ ಹಾಕಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂಟು ಗಂಟೆಯೊಳಗೆ ಲಸಿಕೆ ಪಡೆಯಬೇಕು. ಅಕಸ್ಮಾತ್ ಗಾಯ ತೀವ್ರವಾಗಿದ್ದರೆ ಗಾಯದ ಸುತ್ತಲೂ ರೇಬಿಸ್  ಇಮ್ಯುನೋಗ್ಲೋಬುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕು.



 ಕೊನೆಯದಾಗಿ ಈ ವಿಷಯದಲ್ಲಿ ಮನೆ ಮದ್ದು ಬಳಸುವುದು ಅಥವಾ ನಾಟಿ ವೈದ್ಯರನ್ನು ಸಂಪರ್ಕಿಸುವುದು ಸಾವಿಗೆ ಆಹ್ವಾನ ಕೊಟ್ಟಂತೆ.

 ಕೃಪೆ : ಡಾ. ಮುರಳಿಧರ ಕಿರಣಕೆರೆ,

 ಬರಹ ಸಂಯೋಜನೆ --  ಸಂತೋಷ್ ಮಂಡ್ಯಗೌಡ

No comments:

Post a Comment

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.

 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...