Wednesday, 31 January 2024

ಸಾವಿಗೂ ಮುನ್ನ..!

 

ನಿಮಗೆ ಇಷ್ಟವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಇವತ್ತಲ್ಲ ನಾಳೆ ಒಂದಲ್ಲಾ ಒಂದು ದಿನ ನಾವು ಮಣ್ಣಾಗಲೇಬೇಕು. ಇದನ್ನು ಒಂದು ಸಣ್ಣ ಕಥೆಯ ಮೂಲಕ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇನೆ.
 ಒಂದು ದಿನ ಅಮೆರಿಕಾದ ಹೆಸರಾಂತ ಉದ್ಯಮಿ, ಹೂಡಿಕೆದಾರ, ಲೇಖಕ, ದಾನಿ ಮತ್ತು ರಾಜಕಾರಣಿಯಾದ ಟೆಡ್ ಲಿಯೋನ್ ಅವರು ವಿಮಾನದಲ್ಲಿ ಹೋಗುತ್ತಿರುವಾಗ ಪೈಲೆಟ್ ವಿಮಾನ ಪತನವಾಗುವ ಸೂಚನೆ ನೀಡುತ್ತಾನೆ. ಟೆಡ್  ಲಿಯೋನ್ ಗೆ ಸಾವು ಕಣ್ಣ ಮುಂದೆ ಬಂದು ನಿಂತಿರುವ ಅನುಭವವಾಗುತ್ತದೆ. ತಕ್ಷಣ ಟೆಡ್ ಲಿಯೋನ್ ಅವರು ಜೀವನದಲ್ಲಿ ತಾನು ಅತಿ ಶೀಘ್ರವಾಗಿ ಮಾಡಲೇಬೇಕಾದ ಕೆಲಸಗಳು, ಭೇಟಿ ಮಾಡಬೇಕಾದ ವ್ಯಕ್ತಿಗಳು ಮತ್ತು ನೋಡಬೇಕಾದ ಸ್ಥಳಗಳ ಬಗ್ಗೆ ಯೋಚಿಸುತ್ತಾ ಕುಳಿತಿರುತ್ತಾನೆ. ಅವನ ಅದೃಷ್ಟಕ್ಕೆ ವಿಮಾನ ಸುರಕ್ಷಿತವಾಗಿ ಕೆಳಗಿಳಿಯುತ್ತದೆ.
 ವಿಮಾನದಿಂದ ಇಳಿದ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಕುಳಿತು ಜೀವನದಲ್ಲಿ ಮಾಡಬೇಕಾದ 101 ಕೆಲಸಗಳ ಪಟ್ಟಿ ತಯಾರು ಮಾಡಿ ಸಾಯುವ ಮುಂಚೆ ಅದನ್ನು ಪೂರ್ತಿಗೊಳಿಸುವ ಪ್ರತಿಜ್ಞೆ ಮಾಡುತ್ತಾನೆ. ತದನಂತರ ಕೆಲವೇ ಕೆಲವು ವರ್ಷಗಳಲ್ಲಿ ಎಷ್ಟೋ ಕೆಲಸಗಳನ್ನು ಮಾಡಿ ಮುಗಿಸಿರುತ್ತಾನೆ.
 ಈ ಸಣ್ಣ ನಿಜ ಜೀವನದಲ್ಲಿ ನಡೆದ ನೈಜ ಕಥೆಯನ್ನು ನೋಡಿದರೆ ನಮ್ಮ ಜೀವನದಲ್ಲೂ ಅತೀ ಶೀಘ್ರವಾಗಿ ಮಾಡಬೇಕಾದ ಒಳ್ಳೆಯ ಕೆಲಸಗಳ ಪಟ್ಟಿ ತಯಾರಿ ಮಾಡುವುದು ಉತ್ತಮವೆನಿಸುತ್ತದೆ.
 ಯಾರಿಗೆ ಗೊತ್ತು ಜವರಾಯ ಯಾವ ದಾರಿಯಲ್ಲಿ ನಮ್ಮ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾನೆ ಅಂತಾ?

ಕೃಪೆ: ರಾಬಿನ್ ಶರ್ಮಾ

ಭಾಷಾಂತರ

-- ಸಂತೋಷ್ ಮಂಡ್ಯಗೌಡ 

No comments:

Post a Comment

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.

 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...