ತಾಲೂಕಿನ ಭೂತನ ಹೊಸೂರು ಗ್ರಾಮದ 5 ವರ್ಷ 8 ತಿಂಗಳ ಪುಟಾಣಿ ದೇವಾನಂದನ್, 200 ಇಂಗ್ಲಿಷ್ ಪದಗಳನ್ನು ಕೇವಲ 2 ನಿಮಿಷ 58 ಸೆಕೆಂಡ್ ಗಳಲ್ಲಿ ವೇಗವಾಗಿ ಓದಿ ರಾಷ್ಟ ಮಟ್ಟದ ದಾಖಲೆ ನಿರ್ಮಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಇನ್ನೂ UKG ಯಲ್ಲಿ ಓದುತ್ತಿರುವ ದೇವಾನಂದನ್ ಎಲ್ಲಾ ಕನ್ನಡ ದಿನಪತ್ರಿಕೆಯನ್ನು ಸರಾಗವಾಗಿ ಓದುತ್ತಾ, ಪುಸ್ತಕದಲ್ಲಿ ಇರುವ ಪ್ರಿಂಟಿಂಗ್ ತಪ್ಪುಗಳನ್ನು ಹುಡುಕಿ ತೋರಿಸುವಷ್ಟು ಕನ್ನಡದಲ್ಲಿ ಹಿಡಿತ ಸಾಧಿಸಿದ್ದಾರೆ.
ಇದರ ಜೊತೆಗೆ CBSE ಇಂಗ್ಲಿಷ್ ಒಂದನೇ ತರಗತಿ ಪುಸ್ತಕವನ್ನು ಓದಿ, ಕನ್ನಡದಲ್ಲಿ ಭಾಷಾಂತರ ಸಹ ಮಾಡುತ್ತಾ ಗಣಿತ ಲೆಕ್ಕಗಳನ್ನು ಬಿಡಿಸುತ್ತಾರೆ.
ಮೂರುವರೆ ವರ್ಷದಲ್ಲೇ ಈಜು ಕಲಿತಿರುವ ಈ ಪುಟಾಣಿ ಬಾಲಕ ವಾರಾಂತ್ಯದಲ್ಲಿ 30 ಅಡಿ ಆಳದ ಬಾವಿಯಲ್ಲೂ ಸಹಾ ಸ್ವತಂತ್ರವಾಗಿ ಈಜುತ್ತಾರೆ ಎಂಬುದೇ ಈ ಮಗುವಿನ ವಿಶೇಷ.
ಪ್ರೊ. ಸಂತೋಷ್ ಮಂಡ್ಯಗೌಡ
No comments:
Post a Comment