ನಿಮ್ಮ ಮಕ್ಕಳಿಗೆ ನೀವೇ ಮನೆಯಲ್ಲಿ ಹೇಳಿಕೊಡುವ ಅರ್ಹತೆ, ಸಾಮರ್ಥ್ಯ & ಬಿಡುವು ಇದ್ದರೆ, NIOS (CBSE) - National institute of Open Schooling, ಅಂದರೆ "ರಾಷ್ಟೀಯ ಮುಕ್ತ ವಿದ್ಯಾಲಯ"ದಲ್ಲಿ ಮಕ್ಕಳನ್ನು ಆನ್ಲೈನ್ ದಾಖಲು ಮಾಡಿ, ಮನೆಯಲ್ಲಿಯೇ ಓದಿಸಿ, ನೇರವಾಗಿ 3ನೇ, 5ನೇ, 8ನೇ, & 10ನೇ ತರಗತಿ ಪರೀಕ್ಷೆ ಬರೆಸಿ ಅಂಕಪಟ್ಟಿ ಪಡೆಯಬಹುದು..!
NIOS ನಲ್ಲಿ 10ನೇ ತರಗತಿ ಅಥವಾ 12ನೇ ತರಗತಿ ಪರೀಕ್ಷೆ ಬರೆದ ಮಕ್ಕಳನ್ನು ನಂತರ ನೇರವಾಗಿ ರಾಜ್ಯದ ಅಥವಾ ದೇಶದ ಯಾವುದೇ ಬೋರ್ಡ್ ಸ್ಕೂಲ್, ಕಾಲೇಜು, ಯೂನಿವರ್ಸಿಟಿಗೆ ಸೇರಿಸಿ ವಿದ್ಯಾಭ್ಯಾಸ ಮುಂದುವರೆಸಬಹುದು. ತದನಂತರ ರಾಜ್ಯದ ಅಥವಾ ದೇಶದ ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಸಿ ಸರ್ಕಾರಿ ಕೆಲಸಕ್ಕೆ ಸೇರಿಸಬಹುದು..!
ಕಾರಣಾಂತರಗಳಿಂದ ಶಿಕ್ಷಣ ಅರ್ಧದಲ್ಲಿ ನಿಂತಿದ್ದರೆ, ನಿಮ್ಮ ವಯಸ್ಸಿನ ಆಧಾರದ ಮೇಲೆ ನೇರವಾಗಿ NIOS ನಲ್ಲಿ ಅರ್ಜಿ ಸಲ್ಲಿಸಿ 3ನೇ, 5ನೇ, 8ನೇ 10ನೇ, 12ನೇ ತರಗತಿಗಳ ಪರೀಕ್ಷೆ ಬರೆದು, ಯಾವುದೇ ರಾಜ್ಯದ ಅಥವಾ ದೇಶದ, ಖಾಸಗಿ ಅಥವಾ ಸರ್ಕಾರಿ ಅಥವಾ ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮುಂದುವರಿಸಬಹುದು. ಇದಕ್ಕೆ ಸರ್ಕಾರದ ಮಾನ್ಯತೆ ಇರುತ್ತದೆ.
NIOS ನಲ್ಲಿ ದಾಖಲಾಗಿ ಓದುವ ಮಕ್ಕಳಿಗೆ ತಮಗೆ ಇಷ್ಟ ಬಂದಂತ ವಿಷಯಗಳನ್ನು ಆರಿಸಿ ಪರೀಕ್ಷೆ ಬರೆಯುವ ಅವಕಾಶಗಳಿರುತ್ತದೆ. ಈ ಅವಕಾಶ ರೆಗ್ಯುಲರ್ ಶಾಲೆಗಳಲ್ಲಿ ಇರುವುದಿಲ್ಲ. ರೆಗ್ಯುಲರ್ ಶಾಲೆಯಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವೊಂದು ವಿಷಯಗಳನ್ನು ಕಡ್ಡಾಯವಾಗಿ ಓದಲೇಬೇಕು. ಆದ್ದರಿಂದ NIOS ಶಿಕ್ಷಣ ಪದ್ಧತಿ ದೇಶದಲ್ಲೇ ಉತ್ತಮ ಎಂದು ಹೇಳಬಹುದು!
ಕೊನೆಯದಾಗಿ,
NIOS ನಲ್ಲಿ ದಾಖಲಾತಿ ಪಡೆದು, 1 ಭಾಷಾ ವಿಷಯ & 3 ಇತರ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜದಲ್ಲಿ ಪರೀಕ್ಷೆ ಬರೆದು 'B' ಸರ್ಟಿಫಿಕೇಟ್ ಪಡೆದರೆ 5ನೇ ತರಗತಿಯಲ್ಲಿ ನವೋದಯ ಪರೀಕ್ಷೆ ಬರೆದು, ಪಾಸ್ ಆದರೆ 6 - 12ನೇ ತರಗತಿವರೆಗೆ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆಯಬಹುದು. ನೆನಪಿರಲಿ ತ್ರಿಭಾಷ ಸೂತ್ರ ಕೈ ಬಿಟ್ಟಿರುವ ಏಕೈಕ ವಿದ್ಯಾಲಯ NIOS..!
NIOS ಬಗ್ಗೆ ಜನರು ಸರಿಯಾಗಿ ತಿಳಿದುಕೊಂಡರೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ..!
ಹೆಚ್ಚಿನ ಮಾಹಿತಿಗಾಗಿ...
https://www.nios.ac.in/
ಸಂಯೋಜನೆ: ಪ್ರೋ. ಸಂತೋಷ್ ಮಂಡ್ಯಗೌಡ

No comments:
Post a Comment