Wednesday, 31 January 2024

ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣದ ಮಹತ್ವ

ಮಗುವಿನ ಮೊದಲ ಆರು ವರ್ಷಗಳಲ್ಲೇ ಮೆದುಳಿನಲ್ಲಿ ಶೇಕಡ 90ರಷ್ಟು ಬೆಳವಣಿಗೆ ಆಗಿರುತ್ತದೆ. ಒಂದು ಮಗು ಆರು ವರ್ಷದಿಂದ 60 ವರ್ಷಗಳವರೆಗೆ ಕಲಿಯುವ ವಿದ್ಯೆಗಿಂತಲೂ ಅತಿಹೆಚ್ಚನ್ನು ಆರು ವರ್ಷದ ಒಳಗೆ ಕಲಿತಿರುತ್ತದೆ. ಈ ಪ್ರಮುಖ ಸಮಯದಲ್ಲಿ ಪ್ರತಿಯೊಂದು ಮಗುವು ಪ್ರತಿದಿನ ಪ್ರತಿ ಕ್ಷಣ ಹೊಚ್ಚಹೊಸದನ್ನು ಕಲಿಯುತ್ತಲೇ ಇರುತ್ತದೆ. ಮಕ್ಕಳು ಈ ವಯಸ್ಸಿನಲ್ಲಿ ಮಾಡುವಷ್ಟು ಶತ ಪ್ರಯತ್ನವನ್ನು ಉಳಿದ ಜೀವನದಲ್ಲಿ ಶೇ. ಹತ್ತರಷ್ಟನ್ನು ಪ್ರಯತ್ನಿಸುವುದಿಲ್ಲ ಎಂಬುದಕ್ಕೆ ಪೋಷಕರೇ ಉತ್ತಮ ಉದಾಹರಣೆ. 

ಒಂದು ಮಗುವಿಗೆ ಎರಡು ವರ್ಷ ತುಂಬಿದ ನಂತರ ಮನೆಯ ವಾತಾವರಣದಲ್ಲಿ ಹೊಸದಾಗಿ ಕಲಿಯಲು ಏನು ಉಳಿದಿರುವುದಿಲ್ಲ. ಆದ್ದರಿಂದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಯ ಪ್ರಪ್ರಥಮ ಹೆಬ್ಬಾಗಿಲಾದ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನೋಂದಾಯಿಸಿ ತನ್ನ ವಯಸ್ಸಿನ ಇತರ ಮಕ್ಕಳೊಡನೆ ಬೆಳೆಯಲು ಬಿಡಬೇಕು. ಆ ಸಮಯದಲ್ಲಿ ಬೇರೆ ಮಕ್ಕಳ ಜೊತೆ ಬೆರೆಯುತ್ತಾ ತನ್ನ ವ್ಯಕ್ತಿತ್ವದ ಬಗ್ಗೆ ಅರಿವಾಗುತ್ತಾ ಹೋಗುತ್ತದೆ. ಮಕ್ಕಳು ಸಮಾಜದಲ್ಲಿ ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿಯುತ್ತಾ ಹೋದಂತೆ ಅವರ ವ್ಯಕ್ತಿತ್ವ ವಿಕಾಸನವಾಗುತ್ತದೆ. 


       ಅಮೆರಿಕಾದ ಒಂದು ಸರ್ವೆಯ ಪ್ರಕಾರಸರಿಯಾದ ಪೂರ್ವ ಪ್ರಾಥಮಿಕ ಶಿಕ್ಷಣವಿಲ್ಲದೆ ಒಂದನೇ ತರಗತಿ ಸೇರುವ ಮಕ್ಕಳಲ್ಲಿ ಶೇ.60ಕ್ಕಿಂತ ಕಡಿಮೆ ಮಕ್ಕಳು ಕಾಲೇಜು ಹಂತ ತಲುಪುತ್ತಾರೆ. ಉಳಿದ ಶೇ.40 ರಲ್ಲಿ ಅರ್ಧದಷ್ಟು ಮಕ್ಕಳು ಶಾಲೆ ಬಿಟ್ಟರೆಇನ್ನುಳಿದ  ಅರ್ಧದಷ್ಟು ಮಕ್ಕಳು ಬಾಲ್ಯದಲ್ಲೇ ಮದುವೆಯಾಗುತ್ತಾರೆ. 


      ಬಹು ಮುಖ್ಯವಾಗಿ  ಮೂರನೇ ತರಗತಿಗೆ ಕಾಲಿಡುವ ಮುನ್ನ ಮಕ್ಕಳು ಕನಿಷ್ಠ ಒಂದು ಭಾಷೆಯನ್ನಾದರೂ ಓದಲು ಬರುತ್ತಿದ್ದರೆ ಆ ಮಕ್ಕಳು ಪದವೀಧರವಾಗುವುದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಇಲ್ಲವಾದರೆ ಅವರು ಪದವೀಧರರಾಗುವುದೇ ಅನುಮಾನ.                


       ಪ್ರಮುಖವಾಗಿ ಪೂರ್ವ ಪ್ರಾಥಮಿಕ ಶಾಲೆಯ ಗುಣಮಟ್ಟದ ಶಿಕ್ಷಣದ ಆಧಾರದ ಮೇಲೆ ಮಕ್ಕಳ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಗಿಡ ನೆಟ್ಟು ಬೆಳೆಯುತ್ತಿದ್ದಾಗ ನೀರು-ಗೊಬ್ಬರ ಹಾಕಿ ಆರೈಕೆ ಮಾಡುವುದು ಒಳ್ಳೆಯದು.


ಅಂತರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಶೋಧನಾ ಪತ್ರಿಕೆಯಾದ ನೇಚರ್ ಜರ್ನಲ್,   ಗುಣಮಟ್ಟದ ಶಿಕ್ಷಣದ ಬಗ್ಗೆ ಏನು ಹೇಳುತ್ತೆ ಅಂತ ಅದರ ಮಾತಿನಲ್ಲೇ ಕೇಳಿ...

Children who excel at the math portion of the Scholastic Aptitude Test (SAT) are The kids who test in the top 1% tend to become our eminent scientists and academics, our Fortune 500 CEOs and federal judges, senators and billionaires".

-- Nature Reports.


Suitably Noble Research 

     ಅಮೆರಿಕ ಚೈನಾ ಮತ್ತು ಇನ್ನು ಮುಂತಾದ ಮುಂದುವರೆದ ದೇಶಗಳ ಅಂಕಿ ಅಂಶಗಳನ್ನು ಆಧರಿಸಿ, ಪ್ರಖ್ಯಾತ ನೊಬೆಲ್ ಪ್ರಶಸ್ತಿ ಪುರಸ್ಕೃತ Heckman ತಯಾರಿಸಿದ  Heckman Curve ನಿಂದ ತಿಳಿಯುವುದೇನೆಂದರೆ...


        "ಯಾವ ಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು Skills ಪಡೆದಿರುತ್ತಾರೋ ಆ ಮಕ್ಕಳು ಬೆಳೆದು ದೊಡ್ಡವರಾದ ನಂತರ ಅಷ್ಟೇ ಗುಣಮಟ್ಟದ ಜೀವನ ನಡೆಸುತ್ತಾರೆ.


    ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ... ನಾವು ಎಷ್ಟು ಬೇಗ ಬೀಜವನ್ನು ಬಿತ್ತು ಪೋಷಿಸುತ್ತೇವೋ ಅಷ್ಟೇ ಬೇಗ ಮರಗಳು ಬೆಳೆದು ನಿಂತು ಫಲ ಕೊಡುತ್ತವೆ. ಎಷ್ಟು ನಿಧಾನ ವಿಳಂಬ ಮಾಡುತ್ತಿವೋ ಅಷ್ಟೇ ನಿಧನವಾಗಿ ಬೆಳೆದು ನಿಧಾನವಾಗಿ ಫಲ ಕೊಡುತ್ತವೆ.


    ಆದ್ದರಿಂದ ಮಕ್ಕಳು ತುಂಬಾ ಚಿಕ್ಕವರಿದ್ದಾಗ ಉಡಾಫೆ ಮಾಡದೆ ಅವರ ವಯಸ್ಸಿಗೆ ತಕ್ಕಂತೆ ಅವಶ್ಯಕತೆ ಇರುವ ಪೂರ್ವ ಶಾಲಾ ಶಿಕ್ಷಣ, ಈಜು ಚೆಸ್ ಸೈಕಲ್ ಕರಾಟೆ ಇನ್ನು ಮುಂತಾದ ಜೀವನಕ್ಕೆ ಅವಶ್ಯಕತೆ ಇರುವ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ತುಂಬಾ  ಒಳ್ಳೆಯದು.

--ಪ್ರೊ. ಸಂತೋಷ್ ಮಂಡ್ಯಗೌಡ 


No comments:

Post a Comment

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.

 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...