
Wednesday, 31 January 2024
ದೇಶದ ಅತ್ಯುನ್ನತ ಗುಣಮಟ್ಟದ ಶಾಲೆಗಳೇ ಸೈನಿಕ ಶಾಲೆಗಳು..!

ಅಸಾಧ್ಯವಾದದ್ದನ್ನು ಸಾಧಿಸಬೇಕೆಂದರೆ ಹೃದಯದ ಮಾತು ಕೇಳಬೇಕು..!
ಟಿಬೆಟ್ ದೇಶದ ಲಾಸಾ ಯುನಿವರ್ಸಿಟಿಯಲ್ಲಿ ಯೋಗವನ್ನು ಒಂದು ಕಡ್ಡಾಯ ವಿಷಯವನ್ನಾಗಿ ಅಳವಡಿಸಿ ಪಾಠ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಯೋಗದ ಮೇಲೆ ನಡೆಯುವ ಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಳ್ಳುತ್ತಾರೆ. ಅದರ ಹೆಸರು "Heat Yoga" ಅಥವಾ ಕನ್ನಡದಲ್ಲಿ ತಾಪಯೋಗ ಎಂದು ಕರೆಯಬಹುದು. ತಾಪಯೋಗದ ಪ್ರಕ್ರಿಯೆಯಲ್ಲಿ, ಮನಸ್ಸಿನ ಪ್ರಭಾವದಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವಂತೆ ಮಾಡಲಾಗುತ್ತದೆ. ಇದನ್ನು ನಂಬಲು ತುಂಬಾ ಕಷ್ಟ. ಏಕೆಂದರೆ ಕೊರೆಯುವ ಚಳಿಯ ಹಿಮ ಬೀಳುವ ಸಮಯದಲ್ಲಿ ಬೆತ್ತಲೆ ವಿದ್ಯಾರ್ಥಿಗಳನ್ನು ನಿಲ್ಲಿಸಿ, ಮನಸ್ಸಿನ ಪ್ರಭಾವದಿಂದ ಬೆವರುವಂತೆ ಮಾಡುವುದು..!
--ಪ್ರೋ. ಸಂತೋಷ್ ಮಂಡ್ಯಗೌಡ
ಸೆಪ್ಟೆಂಬರ್ 28: ವಿಶ್ವ ರೇಬಿಸ್ ದಿನ
ಸೆಪ್ಟಂಬರ್ 28ರಂದು ಹುಚ್ಚುನಾಯಿ ರೋಗಕ್ಕೆ ಲಸಿಕೆ ಕಂಡುಹಿಡಿದ ಶ್ರೇಷ್ಠ ವಿಜ್ಞಾನಿ ಲೂಯಿ ಪಾಶ್ಚರ್ ನಿಧನರಾದ ದಿನ. ಈ ದಿನವನ್ನು ಗೌರವಾರ್ಥವಾಗಿ ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.
ಸಾವಿಗೂ ಮುನ್ನ..!
ದಿನಕ್ಕೆ ಎಂಟು ಗಂಟೆ ನಿದ್ರೆ ಮಾಡುವವರೇ ಶ್ರೀಮಂತರು..!
ಪ್ರಪಂಚದಲ್ಲಿ ಯಾವುದಾದರೂ ಪ್ರಾಣಿಗಳು ಹೃದಯಾಘಾತ ಅಥವಾ ಲಕ್ವಾ ಒಡೆದು ಸತ್ತ ಉದಾಹರಣೆಗಳಿವೆಯೇ? ಖಂಡಿತ ಇಲ್ಲ. ಏಕೆಂದರೆ ಅವುಗಳು ದಿನದ ಮೂರನೇ ಒಂದು ಭಾಗ ಅಂದರೆ ಎಂಟು ಗಂಟೆಗಳಿಗಿಂತ ಜಾಸ್ತಿ ನಿದ್ರೆ ಮಾಡುತ್ತವೆ.
ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣದ ಮಹತ್ವ
ಮಗುವಿನ ಮೊದಲ ಆರು ವರ್ಷಗಳಲ್ಲೇ ಮೆದುಳಿನಲ್ಲಿ ಶೇಕಡ 90ರಷ್ಟು ಬೆಳವಣಿಗೆ ಆಗಿರುತ್ತದೆ. ಒಂದು ಮಗು ಆರು ವರ್ಷದಿಂದ 60 ವರ್ಷಗಳವರೆಗೆ ಕಲಿಯುವ ವಿದ್ಯೆಗಿಂತಲೂ ಅತಿಹೆಚ್ಚನ್ನು ಆರು ವರ್ಷದ ಒಳಗೆ ಕಲಿತಿರುತ್ತದೆ. ಈ ಪ್ರಮುಖ ಸಮಯದಲ್ಲಿ ಪ್ರತಿಯೊಂದು ಮಗುವು ಪ್ರತಿದಿನ ಪ್ರತಿ ಕ್ಷಣ ಹೊಚ್ಚಹೊಸದನ್ನು ಕಲಿಯುತ್ತಲೇ ಇರುತ್ತದೆ. ಮಕ್ಕಳು ಈ ವಯಸ್ಸಿನಲ್ಲಿ ಮಾಡುವಷ್ಟು ಶತ ಪ್ರಯತ್ನವನ್ನು ಉಳಿದ ಜೀವನದಲ್ಲಿ ಶೇ. ಹತ್ತರಷ್ಟನ್ನು ಪ್ರಯತ್ನಿಸುವುದಿಲ್ಲ ಎಂಬುದಕ್ಕೆ ಪೋಷಕರೇ ಉತ್ತಮ ಉದಾಹರಣೆ.
ಒಂದು ಮಗುವಿಗೆ ಎರಡು ವರ್ಷ ತುಂಬಿದ ನಂತರ ಮನೆಯ ವಾತಾವರಣದಲ್ಲಿ ಹೊಸದಾಗಿ ಕಲಿಯಲು ಏನು ಉಳಿದಿರುವುದಿಲ್ಲ. ಆದ್ದರಿಂದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಯ ಪ್ರಪ್ರಥಮ ಹೆಬ್ಬಾಗಿಲಾದ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನೋಂದಾಯಿಸಿ ತನ್ನ ವಯಸ್ಸಿನ ಇತರ ಮಕ್ಕಳೊಡನೆ ಬೆಳೆಯಲು ಬಿಡಬೇಕು. ಆ ಸಮಯದಲ್ಲಿ ಬೇರೆ ಮಕ್ಕಳ ಜೊತೆ ಬೆರೆಯುತ್ತಾ ತನ್ನ ವ್ಯಕ್ತಿತ್ವದ ಬಗ್ಗೆ ಅರಿವಾಗುತ್ತಾ ಹೋಗುತ್ತದೆ. ಮಕ್ಕಳು ಸಮಾಜದಲ್ಲಿ ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿಯುತ್ತಾ ಹೋದಂತೆ ಅವರ ವ್ಯಕ್ತಿತ್ವ ವಿಕಾಸನವಾಗುತ್ತದೆ.
ಅಮೆರಿಕಾದ ಒಂದು ಸರ್ವೆಯ ಪ್ರಕಾರ, ಸರಿಯಾದ ಪೂರ್ವ ಪ್ರಾಥಮಿಕ ಶಿಕ್ಷಣವಿಲ್ಲದೆ ಒಂದನೇ ತರಗತಿ ಸೇರುವ ಮಕ್ಕಳಲ್ಲಿ ಶೇ.60ಕ್ಕಿಂತ ಕಡಿಮೆ ಮಕ್ಕಳು ಕಾಲೇಜು ಹಂತ ತಲುಪುತ್ತಾರೆ. ಉಳಿದ ಶೇ.40 ರಲ್ಲಿ ಅರ್ಧದಷ್ಟು ಮಕ್ಕಳು ಶಾಲೆ ಬಿಟ್ಟರೆ, ಇನ್ನುಳಿದ ಅರ್ಧದಷ್ಟು ಮಕ್ಕಳು ಬಾಲ್ಯದಲ್ಲೇ ಮದುವೆಯಾಗುತ್ತಾರೆ.
ಬಹು ಮುಖ್ಯವಾಗಿ ಮೂರನೇ ತರಗತಿಗೆ ಕಾಲಿಡುವ ಮುನ್ನ ಮಕ್ಕಳು ಕನಿಷ್ಠ ಒಂದು ಭಾಷೆಯನ್ನಾದರೂ ಓದಲು ಬರುತ್ತಿದ್ದರೆ ಆ ಮಕ್ಕಳು ಪದವೀಧರವಾಗುವುದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಇಲ್ಲವಾದರೆ ಅವರು ಪದವೀಧರರಾಗುವುದೇ ಅನುಮಾನ.
ಪ್ರಮುಖವಾಗಿ ಪೂರ್ವ ಪ್ರಾಥಮಿಕ ಶಾಲೆಯ ಗುಣಮಟ್ಟದ ಶಿಕ್ಷಣದ ಆಧಾರದ ಮೇಲೆ ಮಕ್ಕಳ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಗಿಡ ನೆಟ್ಟು ಬೆಳೆಯುತ್ತಿದ್ದಾಗ ನೀರು-ಗೊಬ್ಬರ ಹಾಕಿ ಆರೈಕೆ ಮಾಡುವುದು ಒಳ್ಳೆಯದು.
ಅಂತರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಶೋಧನಾ ಪತ್ರಿಕೆಯಾದ ನೇಚರ್ ಜರ್ನಲ್, ಗುಣಮಟ್ಟದ ಶಿಕ್ಷಣದ ಬಗ್ಗೆ ಏನು ಹೇಳುತ್ತೆ ಅಂತ ಅದರ ಮಾತಿನಲ್ಲೇ ಕೇಳಿ...
Children who excel at the math portion of the Scholastic Aptitude Test (SAT) are “The kids who test in the top 1% tend to become our eminent scientists and academics, our Fortune 500 CEOs and federal judges, senators and billionaires".
-- Nature Reports.
Suitably Noble Research
ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ... ನಾವು ಎಷ್ಟು ಬೇಗ ಬೀಜವನ್ನು ಬಿತ್ತು ಪೋಷಿಸುತ್ತೇವೋ ಅಷ್ಟೇ ಬೇಗ ಮರಗಳು ಬೆಳೆದು ನಿಂತು ಫಲ ಕೊಡುತ್ತವೆ. ಎಷ್ಟು ನಿಧಾನ ವಿಳಂಬ ಮಾಡುತ್ತಿವೋ ಅಷ್ಟೇ ನಿಧನವಾಗಿ ಬೆಳೆದು ನಿಧಾನವಾಗಿ ಫಲ ಕೊಡುತ್ತವೆ.
--ಪ್ರೊ. ಸಂತೋಷ್ ಮಂಡ್ಯಗೌಡ
"ರಾಷ್ಟ್ರೀಯ ಮುಕ್ತ ವಿದ್ಯಾಲಯ"ದ ಸ್ವತಂತ್ರ ಶಿಕ್ಷಣ ಕಲಿಕಾ ವ್ಯವಸ್ಥೆ. NIOS - (National Institute of Open Schooling)
ವೇಗವಾಗಿ ಇಂಗ್ಲೀಷ್ ಓದುವುದರಲ್ಲಿ ರಾಷ್ಟ್ರೀಯ ಮಟ್ಟದ ದಾಖಲೆ ಬರೆದ ಮಂಡ್ಯ ಕಬ್..!
ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.
ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...
-
ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...
-
ಕೇಂದ್ರ ಸರ್ಕಾರ 2010ರಲ್ಲಿ ಜಾರಿಗೆ ತಂದ ಶಿಕ್ಷಣ ಕಾಯ್ದೆಯನ್ನು ರಾಜ್ಯದಲ್ಲಿ 2012ರಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ -13ರ ಪ್ರಕಾರ ಡೊನೇಷನ್ ಪಡೆಯುವ...
-
ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ತಯಾರಿಯ ಮೊದಲ ಹೆಜ್ಜೆಯೇ, ಐದನೇ ತರಗತಿಯಲ್ಲಿ ಬರುವ ಸೈನಿಕ ಶಾಲೆಯ ಪರೀಕ್ಷೆ. ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ಪಠ್ಯಕ್ರ...




